18. ಪ್ರತಿದಿನಕ್ಕೆ ಸಿದ್ಧಮಾಡಿದ್ದೇನಂದರೆ, ಒಂದು ಎತ್ತೂ ಉತ್ತಮವಾದ ಆರು ಕುರಿಗಳೂ; ಕೋಳಿಗಳೂ, ಹತ್ತು ದಿವಸಕ್ಕೆ ಒಂದು ಸಾರಿ ಸಕಲ ವಿಧವಾದ ದ್ರಾಕ್ಷಾರಸವೂ ನನಗೋಸ್ಕರ ಸಿದ್ಧಮಾಡಲ್ಪಟ್ಟವು. ಆದರೆ ಈ ಜನರ ಮೇಲೆ ಇದ್ದ ದಾಸತ್ವ ಭಾರವಾಗಿದ್ದದರಿಂದ ನಾನು ಅಧಿಪತಿಯಾದವನ ರೊಟ್ಟಿಯನ್ನು ಇದಕ್ಕೋಸ್ಕರ ಕೇಳಿದ್ದಿಲ್ಲ.ನನ್ನ ದೇವರೆ, ನನಗೆ ಮೇಲನ್ನು ಮಾಡಲು ನಾನು ಈ ಜನರಿಗೆ ಮಾಡಿದ ಎಲ್ಲವನ್ನು ಜ್ಞಾಪಕಮಾಡು.